/newsfirstlive-kannada/media/post_attachments/wp-content/uploads/2024/05/Hariyana-Mother-Attack.jpg)
ಫರಿದಾಬಾದ್: ಅಮ್ಮ ಎಂದರೆ ಏನೋ ಹರುಷವು.. ಕನ್ನಡದ ಕಳ್ಳ, ಕುಳ್ಳ ಸಿನಿಮಾದ ಈ ಹಾಡನ್ನು ಕೇಳುವುದೇ ಆನಂದ. ಅಮ್ಮನ ಮಡಿಲು ಮಕ್ಕಳಿಗೆ ಅಷ್ಟು ಅಚ್ಚುಮೆಚ್ಚು. ಆದರೆ ಹರಿಯಾಣದ ಒಬ್ಬ ತಾಯಿ 11 ವರ್ಷದ ಮಗನಿಗೆ ರಾಕ್ಷಸಿಯಾಗಿದ್ದು, ಈ ಕಟುಕ ತಾಯಿಯ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಹರಿಯಾಣದ ಫರಿದಾಬಾದ್ ನಗರದಲ್ಲಿ ತಾಯಿಯಿಂದ ಮಗನ ಮೇಲೆ ಅಮಾನುಷವಾಗಿ ಹಲ್ಲೆ ಮಾಡಲಾಗಿದೆ. ಈ ದೃಶ್ಯ ಮನೆಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ.
11 ವರ್ಷದ ಮಗನ ಮೇಲೆ ತಾಯಿ ಹಲ್ಲೆ ಮಾಡುತ್ತಿರುವ ಈ ದೃಶ್ಯ ನೋಡಿದ್ರೆ ಎಂಥವರ ಕರುಳು ಚುರುಕ್ ಅನ್ನುತ್ತೆ. ಈ ವಿಡಿಯೋ ವೈರಲ್ ಆದ ಬಳಿಕ ಮಕ್ಕಳ ಕಲ್ಯಾಣ ಸಮಿತಿಗೆ ಈ ತಾಯಿಯ ವಿರುದ್ಧ ದೂರು ದಾಖಲಾಗಿದೆ.
कलेजे के टुकड़े संग ऐसी हरकत? बच्चे को बेरहमी से पीटने का वीडियो वायरल, पिता ने डॉक्टर मां पर लगाए गंभीर आरोप !!#Faridabad_Crime: इन दिनों एक विडियो वायरल है। एक महिला अपने 11 साल के बेटे को बेरहमी से पीटती दिख रही है। कभी वह बच्चे की छाती के ऊपर बैठकर थप्पड़ मारती है तो कभी… pic.twitter.com/SqWLKVJPt9
— MANOJ SHARMA LUCKNOW UP?????? (@ManojSh28986262)
कलेजे के टुकड़े संग ऐसी हरकत? बच्चे को बेरहमी से पीटने का वीडियो वायरल, पिता ने डॉक्टर मां पर लगाए गंभीर आरोप !!#Faridabad_Crime: इन दिनों एक विडियो वायरल है। एक महिला अपने 11 साल के बेटे को बेरहमी से पीटती दिख रही है। कभी वह बच्चे की छाती के ऊपर बैठकर थप्पड़ मारती है तो कभी… pic.twitter.com/SqWLKVJPt9
— MANOJ SHARMA LUCKNOW UP🇮🇳🇮🇳🇮🇳 (@ManojSh28986262) May 27, 2024
">May 27, 2024
ಮಕ್ಕಳ ಕಲ್ಯಾಣ ಸಮಿತಿಗೆ ನೀಡಿದ್ದ ದೂರಿನಲ್ಲಿ ಬಾಲಕ ತಾಯಿಯ ವಿರುದ್ಧ ಹೇಳಿಕೆ ನೀಡಿದ್ದಾನೆ. ಅಮಾನುಷವಾಗಿ ಮಗನ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಹರಿಯಾಣದ ಸೂರಜ್ ಕುಂಡ್ ಪೊಲೀಸ್ ಠಾಣೆಯಲ್ಲಿ ತಾಯಿಯ ವಿರುದ್ಧ ಕೇಸ್ ದಾಖಲಾಗಿದೆ.
ಇದನ್ನೂ ಓದಿ:ಕತ್ತು, ಅಂಗಾಗಗಳನ್ನು ಕತ್ತರಿಸಿ ಭೀಕರ ಕೊಲೆ.. ತಾಳಿ ಕಟ್ಟಿದ ಪತ್ನಿಯನ್ನೇ ಕೊಂದ ಗಂಡ
ತಾಯಿಯ ವಿರುದ್ಧ ಕೇಸ್ ದಾಖಲಾದ ಮೇಲೆ ಹಲ್ಲೆಗೊಳಗಾದ ಬಾಲಕನನ್ನು ತಾಯಿ ತನ್ನ ತವರು ಮನೆಗೆ ಕರೆದೊಯ್ದಿದ್ದಾರೆ. ಇದಾದ ಮೇಲೆ ಈ ಬಾಲಕ ತನ್ನ ತಂದೆಯ ವಿರುದ್ದವೂ ಹೇಳಿಕೆ ನೀಡಿದ್ದಾನೆ. ನನ್ನ ತಂದೆ ಡ್ರಗ್ ಅಡಿಕ್ಟ್ ಆಗಿದ್ದು ಅವರು ನನಗೆ ಹೊಡೆದಿದ್ದಾರೆ ಎಂದು ಹೇಳಿಕೆ ನೀಡಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ